

6th March 2026

ನೇಸರಗಿ- ಸಮೀಪದ ಮಾಸ್ತಮರ್ಡಿ ಗ್ರಾಮದಲ್ಲಿ ಪ್ರಭುಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ರಥೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಗುರುವಾರ ಬಿಡುಗಡೆಗೊಳಿಸಲಾಯಿತು.
ಜಾತ್ರೆಯ ಸಂಪೂರ್ಣ ವಿವರವನ್ನು ಮಾಸ್ತಮರ್ಡಿ ಜಗದ್ಗುರು ಪ್ರಭುದೇವರ ಸಂಸ್ಥಾನ ಗದ್ದುಗೆಮಠದ ಡಾ.ವೀರಪ್ರಭು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒದಗಿಸಿ ಪತ್ರಕರ್ತರೊಂದಿಗೆ ಮಾತನಾಡಿ, ದಿ.೭ ರಂದು ಮುಂಜಾನೆ ಕಳಸಾರೋಹಣ ಹಾಗೂ ಗ್ರಾಮದಿಂದ ಪ್ರಭುದೇವರ ಮಠದವರೆಗೆ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ೧೧ಕ್ಕೆ ನೂತನ ದ್ವಾರಬಾಗಿಲು ಹಾಗೂ ದಾಸೋಹದ ಮಹಾಮನೆ ಉದ್ಘಾಟನೆ ದಿ.೮ ರಂದು ಬೆಳಗ್ಗೆ ೭ ಗಂಟೆಗೆ ಧ್ವಜಾರೋಹಣ ೮ ಗಂಟೆಗೆ ರುದ್ರ ಹೋಮ ಮಹಾರುದ್ರಾಭಿಷೇಕ ಮತ್ತು ನೈವೇದ್ಯ ಮದ್ಯಾಹ್ನ ೧೨ ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ರಾತ್ರಿ ೮ ಗಂಟೆಗೆ ಭಜನಾ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
ದಿ. ೯ ರಂದು ಬೆಳಗ್ಗೆ ೯ ಗಂಟೆಗೆ ಕುಂಭಮೇಳ ಹಾಗೂ ಪಲ್ಲಕ್ಕಿ ಉತ್ಸವ ದೊಂದಿಗೆ ಶ್ರೀಗಳ ಮೆರವಣಿಗೆ ಗ್ರಾಮದಿಂದ ಪ್ರಭುದೇವರ ಮಠದವರೆಗೆ ಶ್ರೀಗಳ ಮೆರವಣಿಗೆ, ಮಧ್ಯಾಹ್ನ ೧ ಸಾಮೂಹಿಕ ವಿವಾಹಗಳು ಜರುಗುವವು. ಮಧ್ಯಾಹ್ನ ೨ ಗಂಟೆಗೆ ಗಂಟೆಗೆ ಧರ್ಮಸಭೆ, ಸಾಯಂಕಾಲ ೪ ಗಂಟೆಗೆ ಹಲವಾರು ಮಠಾಧೀಶರಿಂದ ನೂತನ ತೆರಿಗೆ ಲೋಕಾರ್ಪಣೆಗೊಳ್ಳುವುದು. ಸಂಜೆ ೪ ಕ್ಕೆ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಜಾತ್ರಾ ಕಾರ್ಯಕ್ರಮ ದಲ್ಲಿ
ಅಂಕಲಗಿ ಅಮರಶಿದ್ದೇಶ್ವರ ಶ್ರೀಗಳು, ಹಣಬರಹಟ್ಟಿಯ ಬಸವಲಿಂಗ ಶಿವಾಚಾರ್ಯರು, ಮಲ್ಲಾಪೂರ ಚಿದಾನಂದ ಶ್ರೀಗಳು, ಮಮದಾಪೂರದ ಮೌನ ಮಲ್ಲಿಕಾರ್ಜುನ ಶ್ರೀಗಳು, ಬಳ್ಳಾರಿ ಗುರುಲಿಂಗಾನಂದ ಶ್ರೀಗಳು, ಕಾದ್ರೋಳ್ಳಿ ಶಿವಯೋಗಿ ಪಾಲಾಕ್ಷ ಶ್ರೀಗಳು, ಬೈಲಹೊಂಗಲ ಆರಾದ್ರಿಮಠದ ಮಹಾಂತಯ್ಯ ಸ್ವಾಮೀಜಿ, ಬೈಲಹೊಂಗಲ ಬಗಳಾಂಬಾಮಠದ ಶ್ರೀಗಳು, ಹಾರುಗೊಪ್ಪ ಅಮ್ಮನವರು, ಜಕನಾಯ್ಕನಕೊಪ್ಪ ಅಮ್ಮನವರು, ಪಾಲ್ಗೊಳ್ಳುವರು.
ಈ ಸಂದರ್ಭದಲ್ಲಿ ಮಲ್ಲಪ್ಪ ಮುತ್ತೆನ್ನವರ, ಶಂಕರೆಪ್ಪ ಈರಣ್ಣವರ, ಸಿದ್ದಪ್ಪ ಮಿಂಡೊಳ್ಳಿ, ಉದ್ದಪ್ಪ ಕೊಮಾರ, ಸಿದ್ದಮಲ್ಲಪ್ಪ ತಳವಾರ, ಯಲ್ಲಪ್ಪ ನಾಯಕ, ಯಲ್ಲಗೊಂಡಪ್ಪ ಆಡಿನ, ಬಸವಣೆಪ್ಪ ಕುಮರಿ, ಭೀಮಶಿ ಈರೈನ್ನವರ, ಮಲ್ಲೇಶ ಚಿಕ್ಕೋಡಿ, ಪತ್ರಕರ್ತ ಭೀಮಸೇನ ಕಮ್ಮಾರ , ಇನ್ನಿತರರು ಉಪಸ್ಥಿತರಿದ್ದರು.
undefined
ಅತ್ಯಾಚಾರ ಪ್ರಕರಣ ಆರೋಪಿ ಶಿಕ್ಷಕ ಮಹ್ಮದ್ ಅಜುರುದ್ಧೀನ್ ಗೆ ಜೀವಿತಾವಧಿ ಶಕ್ಷೆ- ಗಂಗಾವತಿ ಜಿಲ್ಲಾ ನ್ಯಾಯಾಲಯದಿಂದ ಆದೇಶ